Types of Stroke
ಲಕ್ವದ ಬಗೆಗಳು.
ಲಕ್ವದಲ್ಲಿ ಮುಖ್ಯವಾದ ಮೂರು ಬಗೆಗಳಿವೆ. ಎಂಬೋಲಿಕ್.ಥ್ರೊಮ್ಬೋಟಿಕ್ ಮತ್ತು ಹೆಮೊರೆಜಿಕ್.
Embolic Stroke
ಎಂಬೋಲಿಕ್ ಲಕ್ವ
ಮಿದುಳಿನ ಸಣ್ಣ ಧಮನಿಯಲ್ಲಿ ಹೃದಯದಿಂದ ಬಂದ ರಕ್ತದ ಹೆಪ್ಪುಗಟ್ಟಿದ ಗಡ್ಡೆ ಅಥವಾ ಧಮನಿಯ ಗೋಡೆಗಳಲ್ಲಿ ಶೇಖರಿತವಾಗಿರುವ ಕೊಬ್ಬಿನಾಂಶ ಕಿತ್ತುಕೊಂಡು ಬಂದು ರಕ್ತದ ಸಂಚರಣೆಗೆ ತೊಂದರೆಯಾದಲ್ಲಿ ಎಂಬೂಲಿಕ್ ಲಕ್ವ ಉಂಟಾಗುತ್ತದೆ.
Thrombotic Stroke
ಥ್ರೋಮ್ಬೊಲಿಕ್ ಲಕ್ವ
ಧಮನಿಗಳ ಗೋಡೆಗಳಲ್ಲಿ ಕೊಬ್ಬಿನಾಂಶ ಮತ್ತು ಕೊಲೆಸ್ಟ್ರಾಲ್ ಶೇಖರಣೆ ಆಗಿ ಇದು ರಕ್ತಸಂಚಲನೆಗೆ ಗಮನೀಯವಾದ ಅಡಚಣೆ ಉಂಟುಮಾಡಿದಾಗ ಥ್ರೋಮ್ಬೋಲಿಕ್ ಲಕ್ವ ಉಂಟಾಗುತ್ತದೆ. ಇಲ್ಲಿ ಅಡಚಣೆ ಉಂಟು ಮಾಡುತ್ತಿರುವುದು ಒಂದು ಥ್ರೋಮ್ಬುಸ್.
Hemorrhagic Stroke
ಹೆಮೊರೆಜಿಕ್ ಲಕ್ವ
ಮಿದುಳಿನ ರಕ್ತಧಮನಿಗಳು ಒಡೆಯುವುದರಿಂದ ಈ ಪ್ರಕಾರದ ಲಕ್ವ ಉಂಟಾಗುತ್ತದೆ. ರಕ್ತಧಮನಿಗಳು ಒಡೆಯಲು ಹಲವಾರು ಕಾರಣಗಳುಇವೆ. ಮುಖ್ಯವಾಗಿ ಅಧಿಕ ರಕ್ತದ ಒತ್ತಡ ಹಾಗು ಒಡೆದುಹೋದ ಮಿದುಳಿನ ಎನ್ಯುರಿಸ್ಮ್ . ಎನ್ಯುರಿಸ್ಮ್ ಎಂದರೆ ರಕ್ತದ ಧಮನಿಯ ಭಿತ್ತಿಯಲ್ಲಿ ಯಲ್ಲಿ ಒಂದು ಜಾಗ ತೆಳುವಾಗಿ ಬಲೂನಿನಾಕರದಲ್ಲಿ ಹಿಗ್ಗುತ್ತದೆ. ಈ ಬಲೂನು ಒಡೆಯುವುದರಿಂದ ಹೆಮೊರೆಜಿಕ್ ಪ್ರಕಾರದ ಲಕ್ವ ಉಂಟಾಗುತ್ತದೆ.
Thrombotic Stroke ani
Hemorrhagic Stroke ani

