Aphasia in Multiple Languages
ಬಹು ಭಾಷೆಗಳಲ್ಲಿ ವಾಕ್ ಸ್ತಂಭನ
ಎರಡು ಅಥವ ಮೂರು ಭಾಷೆ ಮಾತಾಡುವ ವ್ಯಕ್ತಿಗಳಿಗೆ ವಾಕ್ ಸ್ತಂಭನ ಆದಾಗ ಪ್ರತೀ ಭಾಷೆಯಲ್ಲೂ ತೊಂದರೆ ಇರುತ್ತದೆ . ಆದರೆ ಒಂದು ಭಾಷೆಯಲ್ಲಿ ಹೆಚ್ಚು ಒಂದು ಭಾಷೆಯಲ್ಲಿ ಕಡಿಮೆ ತೊಂದರೆ ಕಾಣಬರಬಹುದು . ಹಾಗೆಯೇ ಪ್ರತೀ ಭಾಷೆಯಲ್ಲಿ ಗುಣಮುಖವಾಗುವ ರೀತಿಯೂ ಕೂಡ ಭಿನ್ನವಾಗಿರುತ್ತದೆ ಯಾವ ಭಾಷೆ ಹೇಗೆ ಗುಣವಾಗುತ್ತದೆ ಎಂಬುದು ವ್ಯಕ್ತಿಯ ಭಾಷಾ ಪರಿಸರ, ವ್ಯಕ್ತಿಯು ಆ ಭಾಷೆಗೆ ನೀಡುವ ಮಹತ್ವ , ಆ ಭಾಷೆಯ ಸಾಮಾಜಿಕ ಸಂದರ್ಭತೆ ಇವೇ ಮುಂತಾದ ಸಂಗತಿಗಳ ಮೇಲೆ ಆಧಾರ ಹೊಂದಿರುತ್ತದೆ .
ವ್ಯಕ್ತಿಯು ಯಾವ ಭಾಷೆಯಲ್ಲಿ ಸಂವಹನೆ ಮಾಡಲು ಇಚ್ಚಿ ಸುತ್ತಾನೋ , ಯಾವ ಭಾಷೆಯಲ್ಲಿ ಅವನಿಗೆ ಸುಲಭವಾಗಿ ಸಂವಹನೆ ಮಾಡಲು ಆಗುತ್ತದೋ ಆ ಭಾಷೆಯನ್ನೇ ಬಳಸಲು ಪ್ರೋತ್ಸಾಹಿಸಿ.

