Stroke Treatment
ಲಕ್ವದ ಚಿಕಿತ್ಸೆ
ಲಕ್ವದ ಚಿಕಿತ್ಸೆ ಈಗ ಬಹಳಷ್ಟು ಮುಂದುವರೆದಿದೆ. ಲಕ್ವದ ಪರಿಣಾಮಗಳನ್ನು ಸೀಮಿತಗೊಳಿಸಲು ಹಲವು ಪ್ರಭಾವಿ ಔಷದೋಪಚಾರಗಳು ಹಾಗು ಶಸ್ತ್ರಚಿಕಿತ್ಸೆಗಳು ಲಭ್ಯವಿದೆ. ಆದರೆ ಇವುಗಳು ಎಷ್ಟು ಪರಿಣಾಮಕಾರಿ ಎಂಬುದು ವ್ಯಕ್ತಿಯು ಎಷ್ಟು ಶೀಘ್ರವಾಗಿ ಆಸ್ಪತ್ರೆಗೆ ತಲುಪುತ್ತಾನೆ ಎಂಬುದರ ಮೇಲೆ ಹೊಂದಿರುತ್ತದೆ.
ಮುಖ್ಯವಾದ ೩ ಚಿಕಿತ್ಸಾಕ್ರಮಗಳೆಂದರೆ (೧ )ಟಿಶ್ಯೂ ಪ್ಲಾಸ್ಮಿನೋಜಿನ್ ಆಕ್ಟಿವೇಟರ್ -ಒಂದು ಔಶಧಿ (೨) ಮರ್ಸಿ ರಿಟ್ರೈವಲ್ ಸಿಸ್ಟಮ್-ಒಂದು ಪರಿಕರ, ಮತ್ತು (೩) ಪೆನಂಬ್ರ ಸಿಸ್ಟಮ್ -ಮಗದೊಂದು ಪರಿಕರ
tPA ಔಶಧಿಯನ್ನು ಲಕ್ವದ ಸೂಚನೆ ಕಂಡ ೩ ರಿಂದ ೬ ಗಂಟೆ ಯೊಳಗೆ ಕೊಡುವುದರಿಂದ ರಕ್ತದ ಹೆಪ್ಪನ್ನು ಕರಗಿಸಿ ಮಿದುಳಿನ ರಕ್ತಸಂಚಲನೆಯನ್ನು ಪುನಶ್ಚೇತನ ಗೊಳಿಸಬಹುದು. ಮರ್ಸಿ ಸಿಸ್ಟಮ್ ನಲ್ಲಿ ಒಂದು ತಂತಿಯ ಮೂಲಕ ರಕ್ತದ ಹೆಪ್ಪನ್ನು ಹೆಕ್ಕಿ ತೆಗೆಯಬಹುದು. ಪೆನಂಬ್ರ ಸಿಸ್ಟಮ್ ನಲ್ಲಿ ರಕ್ತದ ಹೆಪ್ಪನ್ನು ಹೀರಿ ತೆಗೆಯಲಾಗುತ್ತದೆ.

