Stroke Risk Factors
ಯಾರಿಗೆ ಲಕ್ವ ಹೊಡೆಯುವ ಸಾಧ್ಯತೆಗಳು ಹೆಚ್ಚು
ಲಕ್ವ ಗಂಡು/ಹೆಣ್ಣು ಚಿಕ್ಕವರು/ದೊಡ್ಡವರು, ಸಣ್ಣಗಿರುವವರು/ದಪ್ಪಗಿರುವವರು ಎಂದು ಭೇದ ಭಾವ ಮಾಡುವುದಿಲ್ಲ. ಆದಾಗ್ಯೂ ಕೆಲವು ಅಂಶಗಳ ಇರುವಿಕೆಯಿಂದ ಲಕ್ವ ಹೊಡೆಯುವ ಸಾಧ್ಯತೆಗಳು ಹೆಚ್ಚುತ್ತವೆ. ಹೆಚ್ಚಿನ ರಕ್ತದ ಒತ್ತಡ, ಹೆಚ್ಚಿನ ಕೊಲೆಸ್ಟ್ರಾಲ್ ಅಂಶ , ಮಧುಮೇಹ, ಧೂಮಪಾನ ಮತ್ತು ಕುಟುಂಬದಲ್ಲಿ ಬೇರೆ ಯಾರಿಗಾದರು ಲಕ್ವ ಇವು ಮುಖ್ಯವಾದ ಅಂಶಗಳು. ನಿಮ್ಮ ವೈದ್ಯರ ಬಳಿ ನಿಮಗೆ ಲಕ್ವ ಬರುವ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಈ ಸಾಧ್ಯತೆಗಳು ಎರಡು ಬಗೆ .. ನಿಯಂತ್ರಿಸಲಾಗುವಂತಹದ್ದು ಮತ್ತು ನಿಯಂತ್ರಿಸಲಾಗದಂತಹುದು.
Controllable Risk Factors
ನಿಯಂತ್ರಿಸಲಾಗುವಂತಹದ್ದು.
. ಅತಿಯಾದ ರಕ್ತದ ಒತ್ತಡ
. ಹೃದಯ ಸಂಬಂಧೀ ರೋಗಗಳು
. ಮಧುಮೇಹ
. ಹೆಚ್ಚಾದ ರಕ್ತದ ಕೊಲೆಸ್ಟ್ರಾಲ್ .
. ಕೊಬ್ಬಿನಾಂಶ ಶೇಖರಣೆಯಿಂದ ಕುಗ್ಗಿದ ರಕ್ತನಾಳಗಳು.
. ದೈಹಿಕ ಚಟುವಟಿಕೆಯ ಕೊರತೆ. (ಜೀವನಶೈಲಿಗೆ ಸಂಬಂಧಿಸಿದ್ದು)
.ಧೂಮ ಮತ್ತು ಮಧ್ಯ ಪಾನ . (ಜೀವನಶೈಲಿಗೆ ಸಂಬಂಧಿಸಿದ್ದು)
Uncontrollable Risk Factors
ನಿಯಂತ್ರಿಸಲಾಗದಂತಹುದ್ದು .
. ವಯಸ್ಸು
. ಲಿಂಗ
. ಯಾವ ಪಂಗಡಕ್ಕೆ ಸೇರಿದ್ದೇವೆ ಎಂಬುದು
. ಕುಟುಂಬಿಕ ಚರಿತ್ರೆ
. ಈ ಮೊದಲು ಲಕ್ವ ಹೊಡೆದದ್ದು

