ಲೈಂಗಿಕತೆ ಮತ್ತು ಪಾರ್ಶ್ವವಾಯು (ಲಕ್ವ) (Sexuality and Stroke
ಪಾರ್ಶ್ವವಾಯು (ಲಕ್ವ) ಮತ್ತು / ಅಥವಾ ಅಫೇಸಿಯಾ ಪುನರ್ವಸತಿಯಲ್ಲಿ ಲೈಂಗಿಕತೆ ಮತ್ತು ಗರ್ಭಧಾರಣೆಯ ಬಗ್ಗೆ ಹೆಚ್ಚಿನ ಗಮನ ನೀಡಿರುವುದಿಲ್ಲ. ಸಾಮಾನ್ಯವಾಗಿ, ಪಾರ್ಶ್ವವಾಯುವಿಗೆ ಮುಂಚಿತವಾಗಿ ಲೈಂಗಿಕವಾಗಿ ಸಕ್ರಿಯರಾಗಿದ್ದ ವ್ಯಕ್ತಿಗಳು ಪಾರ್ಶ್ವವಾಯು ನಂತರವೂ ಕೂಡ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ವಹಿಸುವ ಸಾಧ್ಯತೆಯಿದೆ. ಆದಾಗ್ಯೂ, ಪಾರ್ಶ್ವವಾಯು ಮತ್ತು ಸಂವೇದನೆಯ ಕೊರತೆ ಇರುವಾಗ, ದೈಹಿಕ ಭಾಗವಹಿಸುವಿಕೆಗೆ ಹೊಂದಾಣಿಕೆ ಮತ್ತು ತಾಳ್ಮೆ ಅಗತ್ಯವಿರುತ್ತದೆ. ಪಾರ್ಶ್ವವಾಯು ನಂತರದ ಅವಧಿಯಲ್ಲಿ ಖಿನ್ನತೆ, ಔಷಧಿಗಳ ಅಡ್ಡಪರಿಣಾಮಗಳು, ಅಂಗವಿಕಲತೆಗೆ ಸಂಬಂಧಿಸಿದ ಸ್ವರೂಪ ಕಲ್ಪನೆ, ಆತಂಕ ಹಾಗು ದೈಹಿಕ ಮಿತಿಯ ಕಾರಣದಿಂದಾಗಿ ವ್ಯಕ್ತಿಗಳು ದೈಹಿಕ ಅನ್ಯೋನ್ಯತೆಯ ಆಸಕ್ತಿಯ ಕೊರತೆಯನ್ನು ತಾತ್ಕಾಲಿಕವಾಗಿ ಪ್ರದರ್ಶಿಸಬಹುದು.
ಪಾರ್ಶ್ವವಾಯು (ಲಕ್ವ) ಪೀಡಿತ ವ್ಯಕ್ತಿಯು ಹೆರಿಗೆಯ ವಯಸ್ಸಿನ ಮಹಿಳೆಯಾಗಿದ್ದರೆ, ಆಕೆಯ ಸಂತಾನೋತ್ಪತ್ತಿಯ ಸಾಮರ್ಥ್ಯವು ಲಕ್ವದಿಂದಾಗಿ ಸಮಸ್ಯೆಯಾಗುವ ಸಾಧ್ಯತೆ ತುಂಬ ಕಡಿಮೆ. ವ್ಯಕ್ತಿಯ ಗರ್ಭಧಾರಣೆಯ ಬೇಡಿಕೆಗಳನ್ನು ಪರಿಗಣಿಸಬೇಕು ಮತ್ತು ಹುಟ್ಟುವ ಮಗುವಿನ ಪಾಲನೆ-ಪೋಶಣೆಯ ಬಗ್ಗೆ ನಿರ್ದಿಷ್ಟವಾದ ಯೋಜನೆಯನ್ನು ರೂಪಿಸಿರಬೇಕು. ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಮಹಿಳೆಯರಲ್ಲಿ ಗರ್ಭಧಾರಣೆಯು ಪಾರ್ಶ್ವವಾಯುವಿಗೆ ಕಾರಣವಾಗಬಹುದು (ಹೆಚ್ಚಾದ ರಕ್ತಸ್ರಾವ). ಗರ್ಭಧಾರಣೆಯ ದೈಹಿಕ ಪರಿಣಾಮಗಳು ಹಾಗು ಅದರಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ನಿರ್ದ್ಧಾರ ತೆಗೆದುಕೊಳ್ಳಬೇಕು.
ಗರ್ಭಾವಸ್ಥೆಯಲ್ಲಿನ ತಾಯಿಗೆ ಪಾರ್ಶ್ವವಾಯು (ಲಕ್ವ) ಬಂದರೆ, ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗಬಹುದು. ಈ ಸಂದರ್ಭದಲ್ಲಿ ತಕ್ಷಣವೇ ನರವಿಜ್ಞಾನ ಮತ್ತು ನವಜಾತ ಶಿಶುವಿನ ಆರೈಕೆಗೆ ಸೌಲಭ್ಯಗಳನ್ನು
ಹೊಂದಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು.

