Does aphasia affect a person’s intelligence?
ವಾಕ್ ಸ್ತಂಭನ ವ್ಯಕ್ತಿಯ ಬುದ್ದಿಶಕ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?
ವಾಕ್ ಸ್ತಂಭನವಿರುವ ವ್ಯಕ್ತಿಗೆ ಭಾಷೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮತ್ತು ಬಳಸುವುದರಲ್ಲಿ ತೊಂದರೆ ಇರುತ್ತದೆ. ಪದಗಳನ್ನು/ಹೆಸರುಗಳನ್ನು ಗ್ನಾಪಿಸಿಕೊಳ್ಳುವುದರಲ್ಲಿ ಕಷ್ಟವಾಗುತ್ತದೆ ಆದರೆ ಅವನ ಬುದ್ಧಿಶಕ್ತಿ (ಯೋಚಿಸುವುದು, ಜ್ಞಾಪಕವಿಟ್ಟುಕೊಳ್ಳುವುದು, ಗಮನಕೊಡುವುದು, ಗುರುತಿಸುವುದು) ಕುಂಠಿತವಾಗಿರುವುದಿಲ್ಲ. ವಾಕ್ ಸ್ತಂಭನವಿರುವ ವ್ಯಕ್ತಿಗೆ ಸಂವಹನದ ತೊಂದರೆ ಇರುವುದರಿಂದ ತೀವ್ರ ಮಟ್ಟದ ಭಾಷಾ ತೊಂದರೆ ಇರುವ ವ್ಯಕ್ತಿಗಳನ್ನು ಬುದ್ಧಿ ಕಡಿಮೆ ಇರುವವರು ಎಂದು ತಪ್ಪಾಗಿ ಇತರರು ತಿಳಿಯಬಹುದು.

