Transient Ischemic Attack
ಅಲ್ಪಕಾಲಿಕ ಲಕ್ವ
ರಕ್ತಧಮನಿಯಲ್ಲಿ ಅದಚಣೆಯಿಂದಾಗಿ ಸ್ವಲ್ಪವೇ ಸಮಯಾವಧಿ ಮಿದುಳಿಗೆ ರಕ್ತಸಂಚಾರ ಆಗದಿದ್ದಲ್ಲಿ ಇದನ್ನು "ಟ್ರಾನ್ಸಿಎಂಟ್ ಇಷ್ಕಿಮಿಕ್ ಅಟ್ಟಾಕ್" (T I A) ಎಂದು ಕರೆಯುತ್ತಾರೆ. T I A ನ ಸೂಚನೆಗಳು ಅಲ್ಪಕಾಲಿಕವಾಗಿರುತ್ತವೆ. ಸ್ಪರ್ಶಜ್ಞಾನವಿಲ್ಲದಿರುವುದು, ಮಾತಾಡಲು ತೊಂದರೆ, ಸಮತೋಲನ ಕಳೆದುಕೊಳ್ಳುವುದು ಮತ್ತು ದೃಷ್ಟಿಯ ತೊಂದರೆ ಹೆಚ್ಚೆಂದರೆ ೧೦-೧೫ ನಿಮಿಷಗಳಲ್ಲಿ ಮಾಯವಾಗುತ್ತದೆ. ಈ ಅಲ್ಪಕಾಲಿಕ ಲಕ್ವವನ್ನು ನಿರ್ಲಕ್ಷಿಸಬಾರದು ಏಕೆoದರೆ ಇದು ಮುಂಬರುವ ಪೂರ್ಣಪ್ರಮಾಣದ ಲಕ್ವದ ಮುಂಸೂಚಿಯಾಗಿರುತ್ತ್ತದೆ. ಅಂಕಿಅಂಶಗಳ ಪ್ರಕಾರ T I A ಕಾಣಿಸಿಕೊಂಡ ಶೇಖಡ ೪೦ -೫೦ ಮಂದಿಗೆ ೬ ತಿಂಗಳೊಳಗೆ, ಮತ್ತೆ ಕೆಲವೊಮ್ಮೆ ಹಲವೇ ದಿನಗಳಲ್ಲಿ ಲಕ್ವ ಹೊಡೆಯುತ್ತದೆ. ಅಲ್ಪಕಾಲಿಕ ಲಕ್ವಕ್ಕೆ ಚಿಕಿತ್ಸೆ ನೀಡುವುದರಿಂದ ಪೂರ್ಣಪ್ರಮಾಣದ ಲಕ್ವವನ್ನು ತಡೆಯಬಹುದು.

