Job Search Support Letter
Aphasia and Stroke Association of India
ಭಾರತೀಯ ವಾಕ್ ಸ್ತಂಭನ ಮತ್ತು ಲಕ್ವ ಸಂಸ್ಥೆ.
ನೌಕರಿ ಕೋರಿ ಪತ್ರ.
ಮಾನ್ಯರೇ,
ಮೇಲ್ಕಂಡ ಸಂಸ್ಥೆಯ ಸ್ವಯಂ ಸೇವಕನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ಈ ಪತ್ರದ ಮೂಲ ಉದ್ದೇಶ ಈ ಲಕ್ವ ಹೊಡೆದಿರುವ ವ್ಯಕ್ತಿ ಅಥವಾ ಅವರ ಪತಿ/ಪತ್ನಿ ಗೆ ಸೂಕ್ತ ಕೆಲಸ ಕೋರುವುದು.
ವಯಸ್ಕರಲ್ಲಿ ಕಂಡುಬರುವ ಅಂಗವಿಕಲತೆಗೆ ಲಕ್ವ ಒಂದು ಮುಖ್ಯ ಕಾರಣ. ಇದರಿಂದ ಉಂಟಾಗುವ ವಾಕ್ ಸ್ತಂಭನದಿಂದ ವ್ಯಕ್ತಿಯ ಮಾತನಾಡುವ, ಮಾತನ್ನು ಅರ್ಥಮಾಡಿಕೊಳ್ಳುವ, ಓದುವ ಹಾಗು ಬರೆಯುವ ಸಾಮರ್ಥ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಲಕ್ವ ದಿಂದ ವ್ಯಕ್ತಿಗೆ ಇತರ ದೈಹಿಕ ತೊಂದರೆಗಳೂ ಬರಬಹುದು. ಉದಾ : ನಡೆಯುವುದು/ ದೃಷ್ಟಿ. ಮನೆಯ ಆರ್ಥಿಕ ಜವಾಬ್ದಾರಿ ಹೊತ್ತ ವ್ಯಕ್ತಿಗೆ ಲಕ್ವ ಹೊಡೆದಾಗ ಕುಟುಂಬ ತತ್ತರಿಸಿ ಹೋಗುತ್ತದೆ. ಆದರೆ ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ ಲಕ್ವ ಹೊಡೆದ ವ್ಯಕ್ತಿಗಳಿಗೆ ತಮ್ಮ ಪರಿಸರದ ಬಗ್ಗೆ ನಿಗಾ ಇರುತ್ತದೆ ಮತ್ತು ಅವರು ತರ್ಕಬದ್ಧವಾಗಿ ಆಲೋಚಿಸಬಲ್ಲರು. ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕುದಾದ ಮತ್ತು ಹೆಚ್ಚು ವಿಭಿನ್ನತೆ ಇಲ್ಲದ ಕೆಲಸಗಳನ್ನು ಅವರಿಗೆ ವಹಿಸಿದರೆ ಅವರು ತಕ್ಕಮಟ್ಟಿಗೆ ಕಾರ್ಯಶೀಲರಾಗಬಹುದು.
ನಾವು ವೃದ್ಧರನ್ನು, ಅಬಲರನ್ನು ಮತ್ತು ಅಂಗವಿಕಲರನ್ನು ನಡೆಸಿಕೊಳ್ಳುವ ರೀತಿ ನಮ್ಮ ಸಮಾಜದ ನೈತಿಕ ಹಾಗು ಸಾಮಾಜಿಕ ಗುಣಮಟ್ಟದ ಪ್ರತೀಕವಾಗಿರುತ್ತದೆ.
ಈ ಪತ್ರವನ್ನು ಹೊಂದಿರುವ ಲಕ್ವ ಪೀಡಿತ ವ್ಯಕ್ಥಿಯನ್ನು ಸೂಕ್ತ ಕೆಲಸಕ್ಕೆ ಪರಿಗಣಿಸುವಂತೆ ನಿಮ್ಮನ್ನು ನಾನು ಕೋರುತ್ತೇನೆ. ಅದು ಸಾಧ್ಯವಿಲ್ಲದಲ್ಲಿ ಅವರ ಪತಿ/ಪತ್ನಿ ಗಾದರೂ ಕೆಲಸ ಕೊಡಲು ಸಾದ್ಯವೆ ಎಂದು ಪರಿಗಣಿಸಿ.
ನಿಮ್ಮ ಸಹಾಯದಿಂದ ಒಂದು ಕುಟುಂಬ ಸ್ವಾವಲಂಬಿಯಾಗಿ ತಲೆಎತ್ತಿ ಬಾಳಬಹುದು.
ಶುಭ ಹಾರೈಸುತ್ತಾ
ನಿಮ್ಮ ವಿಶ್ವಾಸಿ.
ಸುಭಾಶ್ c. ಭಟ್ನಾಗರ್, Ph.D. CCC -SLP
ವಾಕ್ ತಜ್ಞರು
subhash.bhatnagar@mu.edu

