Who acquires aphasia?
ವಾಕ್ ಸ್ತಂಭನ ಯಾರಲ್ಲಿ ಉಂಟಾಗುತ್ತದೆ ?
ಲಕ್ವ ಮತ್ತು ವಾಕ್ ಸ್ತಂಭನ ಯಾವುದೇ ವಯಸ್ಸಿನ, ಪ್ರಾಂತ್ಯದ, ಜಾತಿಯ ವ್ಯಕ್ತಿಯಲ್ಲಿ ಉಂಟಾಗಬಹುದು . ಗಂಡಸರು/ಹೆಂಗಸರು, ದಪ್ಪಗಿರುವವರು/ಸಣ್ಣಗಿರುವವರು, ಮಾಂಸಾಹಾರಿಗಳು/ಸಸ್ಯಾಹಾರಿಗಳು ಯಾರಿಗಾದರು ಈ ತೊಂದರೆ ಬರಬಹುದು. ಆದಗ್ಯೂಸಹ ರಕ್ತದೊತ್ತಡ/ಕೊಲೆಸ್ಟ್ರಾಲ್ ಹೆಚ್ಚಾಗಿರುವರಲ್ಲಿ, ಮಧುಮೇಹ ಇರುವವರಲ್ಲಿ,ಕುಟುಂಬದ ಇತರರಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದಲ್ಲಿ ಹಾಗು ದೈಹಿಕ ಚಟುವಟಿಕೆ ಕಡಿಮೆ ಇರುವ ವ್ಯಕ್ತಿಗಳಲ್ಲಿ ಲಕ್ವ ಮತ್ತು ವಾಕ್ ಸ್ತಂಭನ ಬರುವ ಸಾಧ್ಯತೆಗಳು ಹೆಚ್ಚು.

